All posts tagged: Shiva

shaiva

ಮಹಾಭಾರತದಲ್ಲಿ ಮಹಾದೇವನ ಮಹಿಮೆ

ಶಿವ ಮತ್ತು ಕೇಶವನ ಅಭಿನ್ನತ್ವವನ್ನು ವ್ಯಾಸರು ಸ್ಪಷ್ಟವಾಗಿ ವಿವರಿಸಿ ಹೇಳಿದ್ದಾರೆ. ವ್ಯಾಸರಿಂದಲೇ ವಿಷ್ಣು ಸಹಸ್ರನಾಮ ಮತ್ತು ಶಿವ ಸಹಸ್ರನಾಮವೆರಡೂ ನಮಗೆ ಪಂಚಮ ವೇದದಲ್ಲಿ ಪ್ರಾಪ್ತಿಯಾಗಿದೆ. ಈ ಮಹಾಕಾವ್ಯದಲ್ಲಿ ಶಿವನು ವಿಷ್ಣುವಿನ ಆತ್ಮಸ್ವರೂಪಿ ಎಂದೂ ವಿಷ್ಣುವೂ ಶಿವನ ಆತ್ಮಸ್ವರೂಪಿ ಎಂದೂ ಸಾಬೀತುಪಡಿಸುವು ಅನೇಕ ಪ್ರಸಂಗಗಳಿವೆ. ಶಿವ ಮತ್ತು ವಿಷ್ಣುವು ಹರಿಹರರಾಗಿ ಜಗತ್ತಿನಲ್ಲಿ ಶುಭವನ್ನುಂಟು ಮಾಡುತ್ತಾರೆ. ಮಹಾಭಾರತದಲ್ಲಿ ಇವರೀರ್ವರು ಜೊತೆಗೂಡಿ ದ್ವಾಪರ ಯುಗದಲ್ಲಿ ಧರ್ಮವನ್ನು ಸಂಸ್ಥಾಪಿಸಿ ಜಗದೋದ್ಧಾರಕರಾಗಿ ಮಂಗಳವನ್ನುಂಟು ಮಾಡುತ್ತಾರೆ.

ಹೇರಾತ್ – ಕೊಶುರ್ ಸಂಪ್ರದಾಯದಲ್ಲಿ ಮಹಾಶಿವರಾತ್ರಿ 

ಕಾಶ್ಮೀರದಲ್ಲಿ ಮಹಾಶಿವರಾತ್ರಿಯನ್ನು ‘ಹೇರಾತ್’ ಎಂದು ಆಚರಿಸಲಾಗುತ್ತದೆ. ಅಲ್ಲಿನ ಪುರಾಣಗಳ ಪ್ರಕಾರ ಹೇರಾತ್ (ತ್ರಯೋದಶಿ) ಎಂದರೆ ಮಹಾಶಿವರಾತ್ರಿಯ ಹಿಂದಿನ ದಿನದಂದು ಜ್ವಾಲಾಲಿಂಗ ಅಥವಾ ಕಾಂತಿ ಸ್ಥಂಭ ಪ್ರಕಟವಾದ ದಿವಸ ಎಂದು ಹೇಳಲಾಗಿದೆ.