close logo

ಸಮಕಾಲೀನ ಚಿಂತನೆಯ ಆಕರ- ಪುರಾಣ

ಪ್ರಬಂಧದ ಸಾರಾಂಶ

ಪಾರಂಪರಿಕವಾಗಿ ಗಮನಿಸಿರುವ 18 ಮಹಾ ಪುರಾಣಗಳಲ್ಲಿ ದೇವೀಭಾಗವತವೂ ಒಂದು. ಆತ್ಯಂತಿಕ ಸತ್ಯ ಮತ್ತು ಜಗತ್ತಿನ ಮೂಲಭೂತ ಕಾರಣಕರ್ತೃ ದೇವಿಯೇ ಎನ್ನುವ ಸಿದ್ಧಾಂತ ಈ ಕೃತಿಯದು. ಇದರ ಪ್ರಥಮ ಸ್ಕಂದದಲ್ಲಿರುವ ಆಲದೆಲೆಯ ಮೇಲೆ ಮಗುವಿನಂತೆ ಮಲಗಿರುವ ಹರಿಯ ಕಥೆ ಮಾತೃತ್ವದ ವಿವಿಧ ಮುಖಗಳನ್ನು ವಾಸ್ತವಿಕತೆಯ ಎರಡು ಪ್ರಮುಖ ಸಂಗತಿಗಳಾದ ಸೃಷ್ಟಿ, ಸ್ಥಿತಿಗಳ ಆನ್ವಯಿಕ ಅರ್ಥಗಳನ್ನು ಒಳಗೊಳ್ಳುವಂತೆ ವಿವರಿಸುತ್ತದೆ; ವೇದವ್ಯಾಸನ ಮಗ ಶುಕನ ಜನನ ಮತ್ತು ಬದುಕಿನ ಬಗೆಗಿನ ಅವನ ಜಿಜ್ಞಾಸೆಗೆ ಸಂಬಂಧಿಸಿದ ಕಥೆ – “ಬದುಕು ಅಂತರಂಗ ಮತ್ತು ಬಹಿರಂಗಗಳೆರಡನ್ನೂ ಸಾಕ್ಷಿಪ್ರಜ್ಞೆಯಿಂದ ಅವಲೋಕಿಸಬಹುದಾದ ವ್ಯಕ್ತಿಕೇಂದ್ರಿತವಾದದ್ದು. ವ್ಯಕ್ತಿ ಸುಖಕ್ಕೊಂದೇ ಅಲ್ಲ, ನೋವಿಗೂ ಅರ್ಥ, ಮಹತ್ವವನ್ನು ಕಲ್ಪಿಸಬಲ್ಲ, ಆ ಮೂಲಕ ಬದುಕನ್ನು ನೋಡಬಹುದಾದ ನೇತ್ಯರ್ಥಕ ಮನೋಭಾವದಿಂದ ಪಾರಾಗಬಲ್ಲ; ಅದರಿಂದ ಉಂಟಾಗಬಹುದಾದ ದೌಷ್ಟ್ಯದಿಂದ ದೂರಾಗಬಲ್ಲ. ಮನಸ್ಸೇ ಬಂಧನ ಮತ್ತು ಮೋಕ್ಷ ಎರಡಕ್ಕೂ ಮೂಲಕಾರಣ; ಇದನ್ನು ತೀವ್ರವಾದ, ವೈವಿಧ್ಯಮಯವಾದ ಅನುಭವಗಳಿಂದಲೇ ಮನನ ಮಾಡಿಕೊಳ್ಳಬೇಕು” ಎನ್ನುವ ಅಂಶಗಳನ್ನು ಗಮನಿಸುತ್ತದೆ.

ದೇವೀ ಭಾಗವತದ ಇಂಥ ಕಥೆಗಳು ಅವು ಸೂಚಿಸುವ ಹಲವಾರು ಪ್ರಸ್ತುತವಾದ ಸಂಗತಿಗಳಿಂದ ಗಮನಾರ್ಹ.

ಪುರಾಣಮಿತ್ಯೇವ ನ ಅಸಾಧು ಸರ್ವಂ- ಸಮಕಾಲೀನ ಚಿಂತನೆಯ ಆಕರ-ಪುರಾಣ

ಪುರಾಣ-

ಪುರಾಣಮಿತ್ಯೇವ ನ ಸಾಧು ಸರ್ವಂ।
ನ ಚಾ$ಪಿ ಕಾವ್ಯಂ ನವಮಿತ್ಯವದ್ಯಂ।
ಸಂತಃ ಪರೀಕ್ಷ್ಯಾನ್ಯತರತ್ ಭಜಂತೇ।
ಮೂಢಃ ಪರಪ್ರತ್ಯಯನೇಯ ಬುದ್ಧಿಃ॥

ಇದು ಕಾಳಿದಾಸನ ಮಾಳವಿಕಾಗ್ನಿಮಿತ್ರ ನಾಟಕದಲ್ಲಿ ಸೂತ್ರಧಾರನ ಮಾತು. ಪ್ರಾಚೀನವಾದ ಕಾವ್ಯ(ಸಾಹಿತ್ಯ)ವೆಲ್ಲ ಯೋಗ್ಯವಾದದ್ದು, ಹೊಸತಾದುದೆಲ್ಲ ನಿರಾಕರಿಸಬೇಕಾದದ್ದು ಎನ್ನುವುದು ಸರಿಯಲ್ಲ. ಕೃತಿಯನ್ನು ಪರಿಶೀಲಿಸಿದ ನಂತರ ಯಾವುದು ಯೋಗ್ಯವಾದದ್ದು, ಯಾವುದು ಅಸ್ವೀಕಾರಾರ್ಹವಾದದ್ದು ಎಂದು ಸಹೃದಯರು ನಿರ್ಣಯಿಸುತ್ತಾರೆ. ಮೂಢರು(ಅಜ್ಞಾನಿಗಳು) ಮಾತ್ರ ಇನ್ನೊಬ್ಬರು ಹೇಳಿದುದನ್ನು ಅವಲಂಬಿಸುತ್ತಾರೆ ಎಂದೆನ್ನುವ ಈ ಶ್ಲೋಕದಲ್ಲಿ ಪುರಾಣ ಎನ್ನುವುದಕ್ಕೆ ಹಳೆಯದು ಎನ್ನುವ ಅರ್ಥವಿದ್ದರೂ ಅದರ ಧ್ವನ್ಯಾರ್ಥ ಪುರಾಣ ಎಂದು ಕರೆಸಿಕೊಳ್ಳುವ ಕೃತಿ ಎಂದೂ ಆಗುತ್ತದೆ.

ಆಡು ಭಾಷೆಯಲ್ಲಿ ನಿನ್ನ ಪುರಾಣ ಬೇಡ, ಪುರಾಣ ಬಿಚ್ಚಬೇಡ ಎನ್ನುವ ಉದ್ಗಾರಗಳ ಅರ್ಥ ಪುರಾಣ ಎಂದರೆ ಸಾದಾ ಸೀದಾ ಒಪ್ಪಿಕೊಳ್ಳಲಾಗದ, ಸತ್ಯಕ್ಕೆ ದೂರವಾದ ಒಂದು ರೀತಿಯ ಕಲ್ಪಿತ ಕಥೆ ಎಂದೇ. ಪುರಾಣ ಹೇಳುವುದು ವರ್ತಮಾನದ ಸಂಗತಿಯಾಗಿರದೆ ನಾವು ಕಂಡು ಕೇಳರಿಯದ ಕಾಲದ ವೈಯಕ್ತಿಕತೆ, ಸಾಮಾಜಿಕತೆಗಳ ಸಮ್ಮಿಶ್ರಣದ ಕಥೆ; ನಂಬಬಹುದಾದದ್ದು ಎನ್ನುವುದಕ್ಕಿಂತ ಆಕರ್ಷಕವಾದದ್ದು ಎಂದು ಅದನ್ನು ಭಾವಿಸುವುದೇ ಹೆಚ್ಚು. ಪುರಾಣದಲ್ಲಿರುವ ಕಥೆಗಳನ್ನು ಗಮನಕೊಟ್ಟು ನೋಡಿದಾಗ ಅವು ಹಲವು ಆಯಾಮಗಳಿರುವ ಒಂದು ರೂಪಕ ಎಂದೆನ್ನಿಸುತ್ತದೆ.

ದೇವೀ ಭಾಗವತ: ಪಾರಂಪರಿಕವಾಗಿ ಗಮನಿಸಿರುವ 18 ಮಹಾ ಪುರಾಣಗಳಲ್ಲಿ ದೇವೀಭಾಗವತವೂ ಒಂದು. ದೇವೀ ಭಾಗವತದಲ್ಲಿ 12 ಸ್ಕಂದಗಳಿವೆ. ಶಾಕ್ತ ಸಿದ್ಧಾಂತದ ಪ್ರಮುಖ ಕೃತಿಯೆಂದೂ ಇದು ಪ್ರಸಿದ್ಧವಾಗಿದೆ. ಆತ್ಯಂತಿಕ ಸತ್ಯ ಮತ್ತು ಜಗತ್ತಿನ ಮೂಲಭೂತ ಕಾರಣಕರ್ತೃ ದೇವಿಯೇ ಎನ್ನುವ ಸಿದ್ಧಾಂತ ಈ ಕೃತಿಯದು. ದೇವಿಯೇ ಎಲ್ಲದರ ಸೃಷ್ಟಿಕರ್ತೃ, ಸ್ಥಿತಿಕರ್ತೃ, ಲಯ ಕರ್ತೃ ಮತ್ತು ಮೋಕ್ಷಕಾರಕಳು ಎನ್ನುವ ಇಲ್ಲಿಯ ಚಿಂತನೆ ಸ್ತ್ರೀ-ದೈವ-ಭಕ್ತಿ ಕೇಂದ್ರಿತ ಅದ್ವೈತ. ಸ್ತ್ರೀಯ ದೈವಿಕತೆಯನ್ನು ಆತ್ಯಂತಿಕ ಸತ್ಯ ಎಂದು ಗುರುತಿಸುವ ಪುರಾಣಗಳಲ್ಲಿ ಇದೇನೂ ಮೊಟ್ಟ ಮೊದಲನೆಯದೇನೂ ಅಲ್ಲ. ಮಾರ್ಕಂಡೇಯ ಪುರಾಣ ದೇವಿಯನ್ನು ಮೂಲಭೂತ ಸತ್ಯ ಎಂದು ವರ್ಣಿಸಿ ದೇವಿ ಮಾಹಾತ್ಮ್ಯವನ್ನು ಕೊಂಡಾಡುತ್ತದೆ. ದೈವಿಕತೆಯನ್ನು ಸ್ತ್ರೀ ಎಂದು ಪರಿಕಲ್ಪಿಸಿದ್ದುದಕ್ಕೆ 2ನೇ ಶತಮಾನದ ವೇಳೆಗೇ ಶಾಸನೋಕ್ತ ದಾಖಲೆಗಳು ದೊರೆಯುತ್ತವೆ. ದೇವೀ ಭಾಗವತ ಎನ್ನುವುದರ ಅರ್ಥ ಕೃಪಾಕರಿ ದೇವಿಯ ಭಕ್ತ ಎಂದು.

ಆಲದೆಲೆಯ ಮೇಲೆ ಮಲಗಿದ ಹರಿ-

ದೇವೀ ಭಾಗವತದಲ್ಲಿ ಅನೇಕ ಕಥೆಗಳು ಇವೆ. ಇದರ ಪ್ರಥಮ ಸ್ಕಂದದಲ್ಲಿರುವ ಕಥೆಯೊಂದು ಅದು ಸೂಚಿಸುವ ಹಲವಾರು ಸಂಗತಿಗಳಿಂದ ಗಮನಾರ್ಹ.  ಕಥೆಯ ಪ್ರಾರಂಭ ಹೀಗಿದೆ: ಕಲ್ಪಾಂತ್ಯದಲ್ಲಿ ಭಗವಂತನಾದ ಹರಿ ಸಣ್ಣಮಗುವಿನ ರೂಪದಲ್ಲಿ ಆಲದೆಲೆಯ ಮೇಲೆ ಮಲಗಿ ಸಾಗರದಲ್ಲಿ ತೇಲುತ್ತಿದ್ದ. “ಸಣ್ಣ ಮಗುವಿನಂತೆ ನನ್ನನ್ನು ಸೃಷ್ಟಿಸಿದವರು ಯಾರು? ಅವರ ಉದ್ದೇಶವೇನು? ಯಾವ ಧಾತುವಿನಿಂದ, ಹೇಗೆ ಸೃಷ್ಟಿತನಾಗಿದ್ದೇನೆ?” ಎಂದು ಯೋಚಿಸುತ್ತಿದ್ದ. ಆಗ ಒಂದು ಗಂಭೀರವಾದ ಅಶರೀರವಾಣ  ಕೇಳಿಸಿತು: “ಇರುವುದೆಲ್ಲವೂ ನಾನೇ; ಸನಾತನವಾದದ್ದರ ಹೊರತಾಗಿ ಬೇರೆ ಇನ್ನು ಯಾವುದೂ ಅಸ್ತಿತ್ವದಲ್ಲಿಲ್ಲ”. ಅದನ್ನು ಕೇಳಿದ ನಂತರ ಮತ್ತೂ ಯೋಚಿಸಲಾರಂಭಿಸಿದ “ಈ ಧ್ವನಿ ಪುರುಷನದೋ, ಸ್ತ್ರೀಯದೋ ಅಥವಾ ನಪುಂಸಕನದೋ? ಕೇಳಿದ ಮಾತುಗಳ ಅರ್ಥವೇನು?” ಆಗ ಅಮಿತ ತೇಜಸ್ಸಿನಿಂದ

“ಶ್ಲೋಕಾರ್ಧೇನ ತಥಾ ಪ್ರೋಕ್ತಂ ಭಗವತ್ಯಾ$ಖಿಲಾರ್ಥದಮ್। ಸರ್ವಂ ಖಲ್ವಿದಮೇವಾಹಂ ನಾನ್ಯದಸ್ತಿ ಸನಾತನಮ್॥
52.15.1

ಕೂಡಿದ, ಮಂದಹಾಸವುಳ್ಳ ಶುಭಾನನೆಯಾದ ಆದ ಭಗವತಿ ಮಹಾಲಕ್ಷ್ಮಿಯು ಶಂಖ, ಚಕ್ರ, ಗದಾಪದ್ಮ ಧಾರಿ ಚತುರ್ಭುಜೆಯಾಗಿ ಕಾಣ ಸಿಕೊಂಡಳು.

ಮಹಾಲಕ್ಷ್ಮಿ- ದೇವಿಯು ಆಲದೆಲೆಯ ಮೇಲೆ ಮಲಗಿದ್ದ ವಿಷ್ಣುವಿನ ಮುಂದೆ ನಿರಾಧಾರಳಾಗಿ ತನ್ನ ವಿಭೂತಿಗಳು ಹಾಗೂ ಸಹಚರಿಗಳಾದ ರತಿ, ಭೂತಿ, ಬುದ್ಧಿ, ಮತಿ, ಕೃತಿ, ಸ್ಮೃತಿ, ಧೃತಿ, ಶ್ರದ್ಧಾ, ಮೇಧಾ, ಸ್ವಧಾ, ಸ್ವಾಹಾ, ಕ್ಷುಧಾ, ನಿದ್ರಾ, ದಯೆ, ಗತಿ, ತುಷ್ಟಿ, ಪುಷ್ಟಿ, ಕ್ಷಮೆ, ಲಜ್ಜೆ, ಜೃಂಭಾ, ತಂದ್ರಾ ಮತ್ತಿತರರೊಂದಿಗೆ ಶಾಂತಿ, ಸಮಾಧಾನಗಳಿಂದ  ನೀರಿನ ಮೇಲೆ ನಿಂತಿದ್ದಳು. ಇದನ್ನು ನೋಡಿ ವಿಷ್ಣುವು ಇದು ಏನು? ನಾನು ನನ್ನ ತಾಯಿಯನ್ನು ನೋಡುತ್ತಿರುವೆನೇ ಅಥವಾ ಅಸಾಧ್ಯವಾದುದನ್ನು ಸಾಧ್ಯಗೊಳಿಸುವ ಮಾಯೆಯನ್ನೇ? ಈ ಸ್ತ್ರೀಯರೆಲ್ಲ ಎಲ್ಲಿಂದ ಬಂದರು? ನಾನು ಈ ಆಲದೆಲೆಯ ಮೇಲೆ ಏಕೆ ಇದ್ದೇನೆ? ಎಲ್ಲಿಯದು ಈ ಆಲದ ಮರ, ಈ ಆಲದೆಲೆ? ಎಂದು ಆಶ್ಚರ್ಯದಿಂದ ಪ್ರಶ್ನಿಸಿಕೊಂಡ.3  ನಿನಗೆ ಕೇಳಿಸಿದ ಅಶರೀರ ವಾಣಿಯು ಬಂದದ್ದು ಮಹಾಶಕ್ತಿ, ಆದ್ಯ ಶಕ್ತಿ, ಪರಾಶಕ್ತಿ ಮತ್ತು ಎಲ್ಲಾ ವೇದ ಶಾಸ್ತ್ರಗಳ ಸಾರವಾದ ತಾಯಿ ಮಹಾವಿದ್ಯೆಯಿಂದಲೇ. ಆ ವಾಣಿಯನ್ನು ಮರೆಯದಂತೆ ನಿನ್ನ ಹೃದಯದಲ್ಲಿ ಭದ್ರವಾಗಿರಿಸಿಕೋ. ಇದರ ಹೊರತಾಗಿ ಅನನ್ಯಾಸಕ್ತಿಯಿಂದ ತಿಳಿಯಬೇಕಾದದ್ದು ಮತ್ತೊಂದು ಇಲ್ಲ. ನೀನು ದೇವಿ ಮಹಾವಿದ್ಯೆಗೆ ಪ್ರೀತಿಪಾತ್ರನಾದುದರಿಂದ ನಿನಗೆ ಈ ವಾಣಿಯನ್ನು ಕೇಳಿಸಿದ್ದಾಳೆ, ಆ ಮೂಲಕ ನಿನ್ನೊಂದಿಗೆ ಮಾತಾಡಿದ್ದಾಳೆ” ಎಂದಳು ಮಹಾಲಕ್ಷ್ಮಿ.

ಮಾತೃತ್ವ- ಈ ಕಥಾ ಭಾಗವು ಮಾತೃತ್ವದ ವಿವಿಧ ಮುಖಗಳನ್ನು ಪರಿಚಯಿಸುವ ಭಾಗವಾಗಿ ಗಮನಾರ್ಹ. ಮಾತೃತ್ವಕ್ಕೆ ಬೇರೆ ಇನ್ನಾವ ಆಧಾರವೂ ಬೇಕಿಲ್ಲ; ವಾಸ್ತವತೆಯ ಸಾರಸ್ವರೂಪ ಮಾತೃತ್ವ; ಮಾತೃತ್ವದ ರೂಪಗಳು: ರತಿ=ಸಂತೋಷ, ಒಲವು; ಭೂತಿ=ಸೌಖ್ಯ, ಕ್ಷೇಮ; ಮತಿ=ಬುದ್ಧಿ, ವಿಚಾರ, ಗ್ರಹಿಕೆ; ಕೃತಿ=ಕೆಲಸ, ಕುಶಲಕಲಾ ರಚನೆ, ಪಾಂಡಿತ್ಯ; ಸ್ಮೃತಿ=ಧ್ಯಾನ, ಚಿಂತನೆ, ಸ್ಮರಣೆ; ಧೃತಿ=ತಾಳುವಿಕೆ, ಧರಿಸುವಿಕೆ, ಕೆಚ್ಚು, ಆತ್ಮ ಸ್ಥೈರ್ಯ, ಧೈರ್ಯ; ಶ್ರದ್ಧಾ(ಶ್ರದ್ಧೆ)=ವಿಶ್ವಾಸ, ಗೌರವ, ಮನ್ನಣೆ; ಮೇಧಾ=ಬುದ್ಧಿಶಕ್ತಿ, ಕುಶಾಗ್ರತೆ; ಸ್ವಧಾ= ಸ್ವಾಹಾ=ಸ್ವೀಕರಿಸುವಿಕೆ, ಒಪ್ಪಿಕೊಳ್ಳುವಿಕೆ; ಕ್ಷುಧಾ=ಆಸರಿಕೆ, ತೀವ್ರ ಹಂಬಲ, ಬೇಡಿಕೆ; ನಿದ್ರಾ= ಜಡತೆ, ನಿಶ್ಚಲತೆ; ದಯೆ= ಕರುಣೆ, ಕೃಪೆ; ಗತಿ=ಉಪಾಯ, ಹಂಚಿಕೆ, ಜಾಣ್ಮೆ, ಆಧಾರ; ತುಷ್ಟಿ= ತೃಪ್ತಿ, ಆನಂದ; ಪುಷ್ಟಿ= ಪೋಷಣೆ, ಬೆಂಬಲ, ಬೆಳವಣಿಗೆ, ಪ್ರೋತ್ಸಾಹ; ಕ್ಷಮಾ= ಸಾಮರ್ಥ್ಯ, ತಾಳ್ಮೆ, ಸೈರಣೆ, ಅರ್ಹತೆ, ಪರಾಕ್ರಮ; ಲಜ್ಜಾ= ನಾಚಿಕೆ, ಸಂಕೋಚ; ಜೃಂಭಾ= ವಿಕಾಸ, ಹರಡುವಿಕೆ, ಅರಳುವಿಕೆ; ತಂದ್ರಾ= ತಲ್ಲೀನತೆ – ಎಂದು ಹೇಳುವ ಈ ಕಥಾ ಭಾಗ ವಾಸ್ತವಿಕತೆಯ ಎರಡು ಪ್ರಮುಖ ಸಂಗತಿಗಳಾದ ಸೃಷ್ಟಿ, ಸ್ಥಿತಿಗಳ ಆನ್ವಯಿಕ ಅರ್ಥಗಳನ್ನು ಒಳಗೊಳ್ಳುತ್ತದೆ.

ಶಕ್ತಿ-ಶಕ್ತ- ಮುಂದುವರೆದ ಕಥಾಭಾಗದಲ್ಲಿ ಮಹಾಲಕ್ಷ್ಮಿಯು – ಯುಗ ಯುಗಾಂತರಗಳಿಂದಲೂ ಪ್ರತಿಯೊಂದು ಸೃಷ್ಟಿ ಆರಂಭವಾದಾಗಲೂ ನೀನು ಮೊದಲು ಕಾಣಿಸಿಕೊಳ್ಳುತ್ತೀಯ; ನಾನು ನಿನ್ನೊಂದಿಗೆ ಸೇರಿಕೊಂಡಿರುತ್ತೇನೆ; ತಾಯಿ ಮಹಾಶಕ್ತಿಯ ಪ್ರಭಾವದಿಂದಾಗಿ ನೀನು ಇದನ್ನು ಮರೆತಿದ್ದೀಯೆ; ಮಹಾಶಕ್ತಿಯು ಗುಣಾತೀತಳು; ನಾನು ಮತ್ತು ನೀನು ಗುಣಸಹಿತರು; ನನ್ನನ್ನು ಎಲ್ಲಾ ಸತ್ವಗುಣಗಳುಳ್ಳ ಮಹಾಲಕ್ಷ್ಮಿ ಎಂದು ತಿಳಿ; ಎಲ್ಲಾ ರಜೋಗುಣಗಳುಳ್ಳ ಮತ್ತು ಎಲ್ಲಾ ಲೋಕಗಳ ಸೃಷ್ಟಿಕರ್ತನಾದ ಪ್ರಜಾಪತಿ ಬ್ರಹ್ಮನು ನಿನ್ನ ನಾಭಿಕಮಲದಲ್ಲಿ ಅಸ್ತಿತ್ವಕ್ಕೆ ಬರುತ್ತಾನೆ; ಅವನು ತನ್ನ ರಜೋಗುಣದಿಂದ ಮೊದಲಿಗೆ ಪಂಚ ಮಹಾಭೂತಗಳನ್ನು, ಅನಂತರ ಇಂದ್ರಿಯಗಳ ಸಹಿತವಾಗಿ ಮನಸ್ಸನ್ನು ಹಾಗೂ ಇಂದ್ರಿಯಗಳ ಅಧಿದೇವತೆಗಳನ್ನು, ಸೃಷ್ಟಿಸುವುದಕ್ಕೆ ಬೇಕಾದ ಎಲ್ಲಾ ಪರಿಕರಗಳೊಂದಿಗೆ ಮೂರು ಲೋಕಗಳನ್ನು ಸೃಷ್ಟಿಸುತ್ತಾನೆ. ನೀನು ಈ ಲೋಕಗಳ ಸ್ಥಿತಿಕರ್ತ. ಪ್ರಜಾಪತಿಯು ತನ್ನ ಮೊದಲ ಸೃಷ್ಟಿಯಾದ ನಾಲ್ಕು ಮಾನಸ ಪುತ್ರರ ಬಗ್ಗೆ ಕೋಪಗೊಂಡಾಗ ರುದ್ರದೇವ ಕಾಣಿಸಿಕೊಳ್ಳುತ್ತಾನೆ. ಅವನು ತಪಸ್ಸು ಮಾಡಿ ಸಂಹಾರಶಕ್ತಿಯಾದ ತಮೋಗುಣವನ್ನು ಪಡೆಯುತ್ತಾನೆ, ಪಂಚಭೂತಗಳಿಂದಾದ ಈ ಜಗತ್ತನ್ನು

“ತದಾ ಶಾಂತಾ ಭಗವತೀ ಪ್ರಾದುರಾಸ ಚತುರ್ಭುಜಾ। ಶಂಖ ಚಕ್ರ ಗದಾ ಪದ್ಮ ವರಾಯುಧಧರಾ ಶಿವಾ॥56.15.1; 58.15.1(3) “ದಿವ್ಯಾಂಬರಧರಾ ದೇವೀ ದಿವ್ಯ ಭೂಷಣ ಭೂಷಿತಾ। ಸಂಯುತಾ ಸದೃಶೀಭೀಶ್ಚ ಸಖೀಭಿಃ ಸ್ವವಿಭೂತಿಭಿಃ॥ 57.16.1; “ತಾಂ ತಥಾ ಸಂಸ್ಥಿತಾದೃಷ್ಟ್ವಾ ಹೃದಯೇ ಕಮಲೇಕ್ಷಣಃ। ವಿಸ್ಮಿತಃ ಸಲಿಲೇ ತಸ್ಮಿನ್ನಿರಾಧಾರಾಂ ಮನೋರಮಾಮ್॥ 59.15.1; “ಚಿಂತಯಾಮಾಸ ಸರ್ವಾತ್ಮಾ ದ್ರಷ್ಟಮಾಯೋ$ತಿವಿಸ್ಮಿತಃ। ಕುತೋ ಭವಾ ಸ್ತ್ರಿಯಃ ಸರ್ವಾಃ ಕುತೋ$ಹಂ ವಟತಲ್ಪಗಃ॥ 64.15.1; “ಮಮೇಯಂ ಜನನೀ ನೋ ವಾ ಮಾಯಾ ವಾ ಕಾಪಿ ದುರ್ಘಟಾ। ದರ್ಶನಂ ಕೇನ ಚಿತ್ವದ್ಯ ದತ್ತಂ ವಾ ಕೇನ ಹೇತುನಾ॥ 66.15.1 (4) 13.16.1; 15.16.1; 16.16.1; 17.16.1; 18.16.1

ಕಲ್ಪಾಂತ್ಯದಲ್ಲಿ ನಾಶಮಾಡುತ್ತಾನೆ. ನಾನು ಇವೆಲ್ಲಾ ಕಾರ್ಯಗಳಿಗಾಗಿ ನಿನ್ನ ಬಳಿಗೆ ಬಂದಿದ್ದೇನೆ. ನನ್ನನ್ನು ಎಲ್ಲಾ ಸತ್ವಗುಣವುಳ್ಳ ವೈಷ್ಣವೀ ಶಕ್ತಿಯಂತೆ ಸ್ವೀಕರಿಸು, ನಿನ್ನ ಎದೆಯಲ್ಲಿ ನಾನು ಆಶ್ರಯವನ್ನು ಪಡೆದು ಅಲ್ಲಿಯೇ ಸದಾ ನೆಲೆಸಿರುತ್ತೇನೆ – ಎಂದಳು. ವಿಷ್ಣುವು ಇವನ್ನೆಲ್ಲಾ ಕುರಿತು ಧ್ಯಾನಿಸಿದನು. ಬ್ರಹ್ಮ ನಾಭಿಕಮಲದಲ್ಲಿ ಕಾಣಿಸಿಕೊಂಡು ವಿಷ್ಣುವಿನಲ್ಲಿ ಆಶ್ರಯ ಪಡೆದನು.

ತಾಯಿ ಭಗವತಿ- ಈ ಕಥೆಯಲ್ಲಿ ಆದ್ಯಶಕ್ತಿ ತಾಯಿ ಭಗವತಿ ಎನ್ನುವ ವಿಷಯ ಇದೆ. ಮಾತೃತ್ವವನ್ನು ಇದು ಪರಮ ವಾಸ್ತವತೆ ಎನ್ನುತ್ತಿದೆ. ಮಾತೃತ್ವದ ಮೂಲಭೂತ ಸ್ವರೂಪ ಸೃಷ್ಟಿ ಅಥವಾ ಸೃಜನಶೀಲತೆ ಎನ್ನುತ್ತಿದೆ. ಸೃಷ್ಟಿ ಅಥವಾ ಸೃಜನಶೀಲತೆಯ ಸಾರಗುಣವು ಪ್ರಕಟಗೊಳ್ಳುತ್ತಾ ಮತ್ತು ವಿಕಾಸಗೊಳ್ಳುತ್ತಾ ಹೋಗುವ ಶಕ್ತಿ ಎನ್ನುತ್ತಿದೆ. ಆ ಶಕ್ತಿ ಕೇವಲ ರಕ್ಷಕ, ಪೋಷಕ ಅಲ್ಲ, ಅದು ಅಗತ್ಯ ಕಂಡಾಗ ಶಸ್ತ್ರ ಚಿಕಿತ್ಸಕ(ವಿನಾಶಕ)ವೂ ಹೌದು ಎನ್ನುತ್ತಿದೆ. ಸ್ತ್ರೀಯ ಮಾತೃತ್ವದ ಪೋಷಕ ಮತ್ತು ಪ್ರವರ್ಧಕ ಗುಣವನ್ನು ಭಾವಿಸದೆ ಸ್ತ್ರೀ ಗಂಡಿನ ನಿಯಂತ್ರಣದಲ್ಲಿ, ಅಧೀನತೆಯಲ್ಲಿ ಇರುವ, ಇರಬೇಕಾದ ಒಂದು ರೀತಿಯ ಭೋಗ್ಯ ವಸ್ತು ಎಂದು ತಿಳಿಯುವುದು ಸರಿಯಲ್ಲ ಎಂದೆನ್ನುತ್ತಿದೆ. ಅಧೀನತೆ, ನಿಯಂತ್ರಣ ಎನ್ನುವ ಭಾವಗಳೇ ಒಬ್ಬನನ್ನು ಬಂಧಿಸುವ ಸಂಗತಿಗಳು, ಅದೇ ಮಾಯೆ ಎಂಬುದನ್ನು ಸೂಚಿಸುತ್ತಿದೆ. ಶಕ್ತಿ ಅಮೂರ್ತವಾದದ್ದು. ಅದಕ್ಕೆ ಆವರಣ ದೊರೆತಾಗ ಅದು ಶಕ್ತನೊಂದಿಗಿನ ಶಕ್ತಿ ಆಗುತ್ತದೆ. ಶಕ್ತ  ಚರವೂ ಆಗಬಹುದು, ಅಚರವೂ ಆಗಬಹುದು, ಜೀವವೂ ಆಗಬಹುದು, ಅಜೀವವೂ ಆಗಬಹುದು. ಅನುಭವಕ್ಕೆ ಬರುವ ವಾಸ್ತವತೆ ಚರಾಚರ, ಜೀವಾಜೀವ, ದೃಶ್ಯಾದೃಶ್ಯ, ಜಾಗೃತಜಾಗೃತ್. ಅವೆರಡೂ ಪ್ರತ್ಯೇಕವಾಗಿರಲಾರದು. ಇದರ ಸೂಚಕವೇ ಎಲೆಯ ಮೇಲೆ ಮಲಗಿರುವ ವಿಷ್ಣುವಿನ ಕಲ್ಪನೆ. ಮಹಾಲಕ್ಷ್ಮಿ ತನ್ನನ್ನು ವಿಷ್ಣು ಅವನ ಎದೆಯಲ್ಲಿ ಇರಿಸಿಕೊಳ್ಳಲಿ ಎಂದು ವಿಷ್ಣುವಿಗೆ ಹೇಳಿದ ಮಾತುಗಳು.

ಶುಕನ ಜನನ- ದೇವೀ ಭಾಗವತದಲ್ಲಿ ಎಲೆಯ ಮೇಲೆ ಮಲಗಿರುವ ವಿಷ್ಣುವನ್ನು ಎಚ್ಚರಿಸಿದ ಮಹಾಲಕ್ಷ್ಮಿಯ ಈ ಕಥೆಗೆ ಪೂರಕವಾಗಿ ಇನ್ನೊಂದು ಕಥೆ ಇದೆ. ಅದು ಭಾಗವತದ ಕರ್ತೃವಾದ ವ್ಯಾಸನ ಮಗ ಶುಕನಿಗೆ ಸಂಬಂಧಿಸಿದುದು:

ಚಾತಕ ಹಕ್ಕಿಗಳ ಜೋಡಿ ತಮ್ಮ ಮರಿಗಳನ್ನು ಮುದ್ದಿನಿಂದ ಜೋಪಾನ ಮಾಡುತ್ತಿರುವುದನ್ನು ಕಂಡ ಕೃಷ್ಣ ದ್ವೈಪಾಯನ ವ್ಯಾಸನಿಗೆ ತನಗೊಬ್ಬ ಮಗ ಬೇಕು, ಅವನಿಂದ ವಂಶ ಮುಂದುವರೆಯಬೇಕು, ಹಾಗಾಗದಿದ್ದರೆ ತನಗೆ ಸದ್ಗತಿ ಇಲ್ಲ ಎಂದೆನ್ನಿಸಿತು. ತನಗೊಬ್ಬ ಮಗ ಬೇಕು ಎಂದು ಶಂಕರನನ್ನು ಕುರಿತು ತಪಸ್ಸು ಮಾಡಿದ. ಶಂಕರ ಅವನಿಗೆ ಮಗ ಜನಿಸುತ್ತಾನೆ ಎಂದು ವರವನ್ನು ಕೊಟ್ಟ. ತಪೋವನದಿಂದ ತನ್ನ ಕುಟೀರಕ್ಕೆ ಹಿಂತಿರುಗಿದ ವ್ಯಾಸ ಕಲ್ಲುಗಳ ಮಧ್ಯೆ ಆರಣಿಯನ್ನಿಟ್ಟು ಕಲ್ಲುಗಳನ್ನು ಉಜ್ಜಿ ಬೆಂಕಿ ಪಡೆಯಲು ಪ್ರಯತ್ನಿಸುತ್ತಿದ್ದಾಗ ಎದುರಿಗೆ ಬಂದ ಅಪ್ಸರೆ ಘೃತಾಚಿಯಿಂದ ಆಕರ್ಷಿತನಾದ, ಅದನ್ನು ಹಿಡಿತದಲ್ಲಿಟ್ಟುಕೊಳ್ಳಲು ಶಕ್ತಿಮೀರಿ ಪ್ರಯತ್ನಿಸಿದ, ಬೆಂಕಿಗಾಗಿ ಕಲ್ಲುಗಳ ಮಧ್ಯೆ ಇಟ್ಟು ಉಜ್ಜುತ್ತಿದ್ದ ಆರಣಿಯ ಮೇಲೆ ಅವನ ವೀರ್ಯ ಅವನ ಅರಿವಿಲ್ಲದೆ ಬಿತ್ತು, ನೋಡನೋಡುತ್ತಿದ್ದಂತೆ ಒಂದು ಗಂಡು ಮಗು ಆರಣಿಯಿಂದ ಉದಿಸಿ ಬಂದಿತು, ನೋಡ ನೋಡುತ್ತಿದ್ದಂತೆ ದೊಡ್ಡದಾಯಿತು. ತನಗೆ ವ್ಯಾಸ ಶಾಪ ಕೊಡಬಹುದೆಂದು ಹೆದರಿದ ಘೃತಾಚಿ ಶುಕ ಹಕ್ಕಿಯ ರೂಪದಲ್ಲಿ ಹಾರಿ ಹೋದುದನ್ನು ಕಂಡಿದ್ದ ವ್ಯಾಸ ಘೃತಾಚಿಯ ಕಡೆಗೆ ತನ್ನ ಮನಸ್ಸು ಆಕರ್ಷಿತ ಆದುದನ್ನು ಒಪ್ಪಿಕೊಂಡು ಮಗನಿಗೆ ಶುಕ ಎಂದು ಹೆಸರಿಟ್ಟ. ಹುಟ್ಟುತ್ತಲೇ ವಿದ್ಯಾಭ್ಯಾಸ ಮಾಡಬಹುದಾದಷ್ಟು ದೊಡ್ಡವನಾದ ಶುಕನನ್ನು ಬೃಹಸ್ಪತಿಯ ಬಳಿ ವಿದ್ಯಾಭ್ಯಾಸಕ್ಕಾಗಿ ಕಳುಹಿಸಿದ.

ಗೃಹಸ್ಥಾಶ್ರಮ- ಕೆಲಕಾಲದ ನಂತರ ವಿದ್ಯಾಭ್ಯಾಸ ಪೂರೈಸಿದ ಶುಕ ಮನೆಗೆ ಹಿಂತಿರುಗಿದ. ಅವನಿಗೆ ವ್ಯಾಸ ಮದುವೆಯಾಗಿ ಮಕ್ಕಳನ್ನು ಪಡೆದು ತನಗೆ ಸದ್ಗತಿ ದೊರಕಿಸಿಕೊಡು ಎಂದು ಕೇಳಿಕೊಂಡ. ವ್ಯಕ್ತಿಯೊಬ್ಬ ಬ್ರಹ್ಮಚಾರಿಯಾಗಿರಲೀ, ವಾನಪ್ರಸ್ಥಾಶ್ರಮಿಯಾದರೂ ಆಗಿರಲಿ ಅಥವಾ ಸನ್ಯಾಸಿಯಾದರೂ ಆಗಿರಲಿ ಅಥವಾ ಮತ್ತಾವುದೇ ರೀತಿಯ ವ್ರತಾನುಯಾಯಿಯಾದರೂ ಆಗಿರಲಿ ಅವನು ಮಾಧ್ಯಾಹ್ನಿಕಕ್ಕಾಗಿ ಗೃಹಸ್ಥನನ್ನು ಆಶ್ರಯಿಸಲೇ ಬೇಕು;7 ಮನೆಯು ಬಂಧನಾಗಾರ ಅಲ್ಲ, ಮನೆ ಬಂಧನವಾಗಲು ಕಾರಣವೂ ಇಲ್ಲ. ಮನಸ್ಸಿನಲ್ಲಿ ಮುಕ್ತನಾದವನು ಮೋಕ್ಷವನ್ನು ಪಡೆಯಬಲ್ಲ; ಹೆಂಡತಿಯನ್ನ ಹೊಂದಿಲ್ಲದವನು ಅದಮ್ಯ ಇಂದ್ರಿಯ- ಆವೇಗಗಳಿಗೆ ಸಿಲುಕಿ ಹುಚ್ಚನಂತಾಗಿಬಿಡುತ್ತಾನೆ; ಗೃಹಸ್ಥಾಶ್ರಮ ಸರ್ವ ಶ್ರೇಷ್ಠವಾದದ್ದು

3.16.1; 4.16.1; 5.16.1; 6.16.1; 7.16.1; 8.16.1; 9.16.1; 10.16.1 (6) 22.16.1 “ನ ಗೃಹ ಬಂಧನಾಗಾರಂ ಬಂಧನೇ ಚ ನ ಕಾರಣಂ। ಮನಸಾ ಯೋ ವಿನಿರ್ಮುಕ್ತೋ ಗೃಹಸ್ಥೋ$ಪಿ ವಿಮುಚ್ಯತೇ”॥54.14.1॥   

ಎಂದ. ಶುಕ ತಂದೆಯ ಮಾತನ್ನು ಸರಿಯಾದದ್ದು ಎಂದು ಒಪ್ಪಿಕೊಳ್ಳಲಿಲ್ಲ. ತನ್ನ ನಿಲುವಿಗೆ ಶುಕ ಕೊಡುವ ಕಾರಣಗಳು:

(ಅ) ಮನುಷ್ಯನನ್ನು ಯಾವುದು ಹಿಡಿದಿಡುತ್ತದೆಯೋ ಅದೇ ಗೃಹ; ಬಂಧನಾಗಾರದದಲ್ಲಿ ಸುಖವನ್ನು ನಿರೀಕ್ಷಿಸಲು ಆಗುವುದಿಲ್ಲ. (ಆ) ಮದುವೆಯಾದರೆ ನಿಶ್ಚಿತವಾಗಿ ಆ ಸ್ತ್ರೀಗೆ ನಾನು ವಶವರ್ತಿಯಾಗಬೇಕಾಗುತ್ತದೆ. ವಶವರ್ತಿಯಾದವನಿಗೆ ಅವಲಂಬಿತ ಸುಖ ಸಂತೋಷ ಇರುತ್ತದೆಯೇ ವಿನಃ ತನ್ನದೇ ಆದ ಸುಖ ಸಂತೋಷ ಎನ್ನುವುದೂ ಇರುವುದಿಲ್ಲ, ಸ್ವಾತಂತ್ರ್ಯವೂ ಇರುವುದಿಲ್ಲ. (ಇ) “ಹಣ ಸಂಪಾದನೆ ಹೇಗೆ ಮಾಡುವುದು ಎನ್ನುವ ಆತಂಕದಲ್ಲಿಯೇ ಇರಬೇಕಾಗುವ ಗೃಹಸ್ಥ ಸಂತೋಷದಿಂದ ಇರಲು ಸಾಧ್ಯವಿಲ್ಲ. ಧರ್ಮಶಾಸ್ತ್ರಗಳನ್ನು ಅಧ್ಯಯನ ಮಾಡಿದ ಬ್ರಾಹ್ಮಣ ತನ್ನ ಬಡತನವನ್ನು ಹೋಗಲಾಡಿಸಿಕೊಳ್ಳಲು ಧನಿಕರ ಮನೆಗೆ ಅಲೆದಾಡಬೇಕಾಗುತ್ತದೆ, ಅವರನ್ನು ಸುಮ್ಮ ಸುಮ್ಮನೆ ಹೊಗಳಬೇಕಾಗುತ್ತದೆ. ಗೃಹಸ್ಥನಾಗದಿದ್ದರೆ ಈ ರೀತಿಯ ಯಾವ ಎಡರುತೊಡರುಗಳೂ ಇರುವುದಿಲ್ಲ. ಗೆಡ್ಡೆ ಗೆಣಸು, ನಾರು ಬೇರುಗಳಿಂದ ಹೊಟ್ಟೆ ತುಂಬಿಸಿಕೊಳ್ಳಬಹುದು.

(ಈ) ದೇಹ ಮಲಮೂತ್ರಾದಿ ಕಶ್ಮಲಯುತವಾದದ್ದು. ಆತ್ಮಸುಖವನ್ನು ಬಯಸುವ ವಿವೇಕಿಗಳು ಕಶ್ಮಲಯುತ ಇಂದಿಯಸುಖದ ಹಿಂದೆ ಹೋಗುವುದಿಲ್ಲ. (ಉ) ಪರಿಶುದ್ಧವಾದ ಸುಖ, ಸಂತೋಷ ಎನ್ನುವುದು ಇಲ್ಲವೇ ಇಲ್ಲ. ನೋವಿಲ್ಲದ ಸಂತೋಷ, ದುಃಖವಿಲ್ಲದ ಸುಖ ಇಲ್ಲವೇ ಇಲ್ಲ. ಹುಟ್ಟಿನೊಂದಿಗೇ ನೋವು ಆಗಮಿಸುತ್ತದೆ. ಆಸೆ ಮತ್ತು ಲೋಭದಿಂದ ಉಂಟಾಗುವ ನೋವು. ಇದು ಸಾವಿಗಿಂತಲೂ ಹೆಚ್ಚು ಕಠೋರವಾದದ್ದು, ಮೊನಚಾದದ್ದು. (ಊ) ಗೃಹಸ್ಥನಾಗುವುದು ಎಂದರೆ ವೇದೋಕ್ತ ಕರ್ಮಗಳ ಆಚರಣೆಯನ್ನು ಒಪ್ಪಿಕೊಳ್ಳುವುದು ಎಂದರ್ಥ. ವೇದಗಳ ಕರ್ಮಾಂಗವಾದರೋ ಹಿಂಸೆಯಿಂದ ಕೂಡಿದೆ. ಕರ್ಮಗಳು ಮನುಷ್ಯನನ್ನು ಮಾಯೆಯ ತ್ರಿಗುಣಗಳಿಂದ ರಚನೆಗೊಂಡಿರುವ ಪ್ರಪಂಚಕ್ಕೆ ಕಟ್ಟಿಹಾಕುತ್ತದೆ. ಸಂಸಾರಕ್ಕೆ ಕಟ್ಟಿಹಾಕುವ ಶಾಸ್ತ್ರಗಳ ಅಧ್ಯಯನದಿಂದ ಮೋಕ್ಷಾರ್ಥಿಗೆ ಯಾವ ಪ್ರಯೋಜನವೂ ಇಲ್ಲ. ಮನುಷ್ಯರ ಹಾಗೆ ಜನಿಸಿ ಪುನಃ ಬಂಧನಕ್ಕೊಳಗಾಗುವವರು ವಿಧಿಯಿಂದ ವಂಚಿತರಾದ ಮಂದಮತಿಗಳು.

ಮುಂದುವರೆಯುವುದು…

(Image credit: vecteezy.com)

Disclaimer: The opinions expressed in this article belong to the author. Indic Today is neither responsible nor liable for the accuracy, completeness, suitability, or validity of any information in the article.

Leave a Reply