ಸತ್ಯಪಾಲನೆ ಮತ್ತು ಧರ್ಮಪಾಲನೆಯ ಮರ್ಮ
ನಮ್ಮ ಮಾತಿನಿಂದ ಸಜ್ಜನರಿಗೆ ಹಿತವೆನಿಸಬೇಕು. ಒಳ್ಳೆಯವರ ಮನ ನೋಯಬಾರದು. ಅಂತಹ ಮಾತೇ ಸತ್ಯ. ನಮ್ಮ ನಡವಳಿಕೆಯಿಂದ ಸಜ್ಜನರಿಗೆ ಉಪಕಾರವಾಗಬೇಕು. ನಮ್ಮ ಕೆಲಸದಿಂದ ಅಮಾಯಕರಿಗೆ ತೊಂದರೆ ಆಗಬಾರದು. ಆಂತಹ ನಡವಳಿಕೆಯೇ ಧರ್ಮ. ಇದೇ ಮಹಾಭಾರತದ ಈ ಪ್ರಸಂಗದಲ್ಲಿ ಕೃಷ್ಣ ಅರ್ಜುನನನಿಗೆ ಮನವರಿಕೆ ಮಾಡಿಕೊಟ್ಟದ್ದು.