ಭೀಮ – ದುರ್ಯೋಧನರ ಕಾಳಗ: ಭಾಗ ೧

ಕರ್ಣಾರ್ಜುನರ ಯುಧ್ಧದ ಬಗ್ಗೆ ನಮ್ಮೆಲ್ಲರಿಗೂ ಅರಿವಿದೆ. ಅಷ್ಟೇ ರೋಚಕವಾದ ಮತ್ತೊಂದು ಸಮರ ಭೀಮ ಹಾಗು ದುರ್ಯೋಧನರದ್ದು. ಯಥೇಚ್ಛ ಬಲ, ಯುಧ್ಧ ಕೌಶಲ, ನಿರ್ಭಯತೆ, ರಣ ನೀತಿ, ಧರ್ಮಾಧರ್ಮಗಳ ಮೀಮಾಂಸೆ ಇವೆಲ್ಲವನ್ನೂ ಒಳಗೊಂಡ ರೋಚಕ ಕಥೆ ಇದು. ಎಷ್ಟು ಸಹಸ್ರ ವರ್ಷಗಳಾದರೂ ಈ ಕಥೆಯು ಅಸಾಧಾರಣ ರೀತಿಯಲ್ಲಿ ನಮ್ಮ ಅಂತಃಕರಣವನ್ನು ಹೊಕ್ಕು ಕಮಲವು ಅರಳುವಂತೆ ನಮ್ಮ ಬುದ್ಧಿಯನ್ನು ಪ್ರಚೋದಿಸುತ್ತದೆ.

ನಿಶ್ಚಲ ಪ್ರವಾಹ

ಅನಾಸಕ್ತತೆಯಿಂದ ಕೇವಲ ಆತ್ಮಜ್ಞಾನದಲ್ಲೇ ಸಂತುಷ್ಟನಾಗಿ, ಆತ್ಮಸ್ಥೈರ್ಯವನ್ನು ರೂಢಿಸಿಕೊಂಡವನಿಗೆ ಯುಗಾಂತರಗಳ ಬಾಧೆಯಾಗಲಿ ಅಥವಾ ಇನ್ನಾವುದೇ ಲೌಕಿಕ ತಾಪತ್ರಗಳ ಅಡ್ಡಿ ಇರುವುದಿಲ್ಲ.

ಕಾಶ್ಮೀರದ ಮಾತೃಗುಪ್ತನ ರೋಮಾಂಚಕ ಚರಿತ್ರೆ – ಮುಕ್ತಾಯ

ಮಾತೃಗುಪ್ತನ ಹಿರಿಮೆಯೋ, ವಿಕ್ರಮಾದಿತ್ಯನ ಮಹಿಮೆಯೋ, ಪ್ರವರಸೇನನ ಗರಿಮೆಯೋ – ಇದನ್ನೆಲ್ಲಾ ಬರೆದ ಕಲ್ಹಣನ ಸಾಂಸ್ಕೃತಿಕ ಪ್ರಜ್ಞೆಯೋ – ಇದೆಲ್ಲವೂ ಇರುವ ಅವನ ರಾಜತರಂಗಿಣಿಯೋ – ಇವೆಲ್ಲವೂ ಪ್ರಾತಃಸ್ಮರಣೀಯವೇ ಸರಿ.
ನಮ್ಮ ಪಠ್ಯಪುಸ್ತಕಗಳಲ್ಲಿ ಇವು ಏಕಿಲ್ಲ?

ಕಾಶ್ಮೀರದ ಮಾತೃಗುಪ್ತನ ರೋಮಾಂಚಕ ಚರಿತ್ರೆ

ಮಾತೃಗುಪ್ತನ ಬಗ್ಗೆ ನಮಗೆ ಕಾಶ್ಮೀರದ ಕಲ್ಹಣನು ಬರೆದಿರುವ ರಾಜತರಂಗಿಣಿಯಲ್ಲಿ ಇರುವ ವಿಚಾರ ಹಾಗು ಅದರ ವಿಶ್ಲೇಷಣೆ – ಈ ಲೇಖನದ ಉದ್ದೇಶ. ಅವಂತೀ ಭೂಪತಿಯಾಗಿದ್ದ ಶಕಾರಿ ವಿಕ್ರಮಾದಿತ್ಯನ ಆಸ್ಥಾನ ಕವಿಯಾಗಿದ್ದವನು ಮಾತೃಗುಪ್ತ. ಮೂಲತಃ ಕಾಶ್ಮೀರ ದೇಶದವನಾಗಿದ್ದ ಈತ ಹಲವು ದೇಶಗಳಲ್ಲಿ ಸಂಚರಿಸುತ್ತ ಕಡೆಗೆ ಉಜ್ಜಯನಿಯಲ್ಲಿ ನೆಲೆಸಿದ.

Dharma and Ecology

Our two greatest epics Ramayan and Mahabharata have extensively advocated an ecological balance even in eras when the natural habitats were intact and far from any damage.